ಗ್ಯಾಸ್ ಜನರೇಟರ್

ಗ್ರಾಮೀಣ ಭಾಗಕ್ಕೆ ಗೋಬರ್ ಗ್ಯಾಸ್ ಹೊಸದೇನಲ್ಲ. ಆದರಿದು ಮನೆ ಬಳಕೆಗೆ ಮಾತ್ರ ಸೀಮಿತವಾಗಿತ್ತು. ಇದನ್ನು ನೀರೆತ್ತುವ ಪಂಪ್ಸೆಟ್ಗಳಿಗೆ ಬಳಸಿದರೆ ಹೇಗೆ? ಹೌದು, ಈ ರೀತಿಯ ಒಂದು ಪ್ರಯತ್ನ ಕೃಷಿ ವಿವಿಯ ಹಿರಿಯ ಸಂಶೋಧಕೃಷಿ ವಿ. ಕುಮಾರ ಗೌಡ ಮಾಡಿದ್ದಾರೆ. ಹೆಸರು ಜೈವಿಕ ಅನಿಲ ಘಟಕ. ಕರೆಂಟ್ ಕಣ್ಣಾ ಮುಚ್ಚಾಲೆಗೆ ಬೇಸತ್ತ ರೈತರಿಗೆ ಗೋಬರ್ ಗ್ಯಾಸ್ ಕೈ ಹಿಡಿಯಬಹುದು. ಇದರಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಲಭ್ಯ. ಗೋಬರ್ ಗ್ಯಾಸ್ನಲ್ಲಿ ಶೇ. 60ರಷ್ಟು ಮಾತ್ರ ಮೀಥೆಲ್ ಅಂಶ ಇರುತ್ತೆ. ಮಿಕ್ಕಿದ್ದು ಕಾರ್ಬನ್ ಡೈ ಆಕ್ಸೆ„ಡ್. ಇದನ್ನು ಬೇರ್ಪಡಿಸಿ ಮೀಥೆಲ್ನಲ್ಲಿ ಜನರೇಟರ್ ಚಾಲೂ ಮಾಡುವುದು ಈ ಅನಿಲ ಘಟಕದ ವಿಶೇಷ.

ನೀರೆತ್ತುವ ಪಂಪ್ಸೆಟ್ಟುಗಳಿಗೆ, ರಾಗಿ-ಅಕ್ಕಿ ಗಿರಣಿ, ಧಾನ್ಯಗಳನ್ನು ಒಕ್ಕಣೆ ಮಾಡುವ ಯಂತ್ರಗಳ ಚಾಲನೆಗೆ ಇದೊಂದು ವರದಾನ. ಇದರಂತೆ ದ್ವಿ ಇಂಧನ ಚಾಲಿತ ಜನರೇಟರ್ ಇದೆ. ಇದರ ಚಾಲೂಗೆ ಪೆಟ್ರೋಲೂ ಬಳಸಬಹುದು. ಇಂಥ ಇಂಜಿನ್ಗೆ ಅಲ್ಪ$ಪ್ರಮಾಣದ ಡೀಸೆಲ್ ಮತ್ತು ಪೆಟ್ರೋಲ್ ಸಾಕು. ಡೀಸೆಲ್ ಇಂಜಿನ್ಗೆ ಜೈವಿಕ ಅನಿಲ ಬಳಸಿದಾಗ ಶೇ. 20ರಷ್ಟು ಡೀಸೆಲ್ ಬಳಕೆ ಯಾಗುತ್ತದೆ. ಆದರೆ ಪೆಟ್ರೋಲ್ ಚಾಲಿತ ಇಂಜಿನ್ ಆರಂಭದ ಕೆಲವೇ ನಿಮಿಷ ಪೆಟ್ರೋಲ್ ಬೇಕು. ಉಳಿದಂತೆ ಜೈವಿಕ ಅನಿಲದಿಂದಲೇ ಚಾಲಿತವಾಗುತ್ತದೆ.

ಒಂದು ಅಶ್ವಶಕ್ತಿಯ ದ್ವಿ-ಇಂಧನ ಚಾಲನೆಗೆ ಪ್ರತಿಘಂಟೆಗೆ 0.50 ಘನಮೀಟರ್ ಪ್ರಮಾಣದ ಜೈವಿಕ ಅನಿಲ ಅಗತ್ಯ. ಇದರಿಂದ 1.13 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ ಎನ್ನುತ್ತಾರೆ ಹಿರಿಯ ಸಂಶೋಧಕ ವಿ. ಕುಮಾರ ಗೌಡ.

ರೈತರು ಅವಶ್ಯಕತೆಗೆ ತಕ್ಕಷ್ಟು ಅಶ್ವಸಾಮರ್ಥ್ಯದ ಜೈವಿಕ ಅನಿಲ ಘಟಕ ಮತ್ತು ದ್ವಿ-ಇಂಜಿನ್ ಆಧರಿತ ಇಂಜಿನ್ ಅನ್ನು ಸ್ಥಾಪಿಸಬಹುದು. ಇವುಗಳಿಗೆ ತಗುಲುವ ವೆಚ್ಚವೂ ಕಡಿಮೆ. ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಗೆ ಸಮುದಾಯ ಆಧಾರಿತ ಸ್ಥಾವರ-ದ್ವಿ-ಇಂಜಿನ್ ಸ್ಥಾಪಿಸಬಹುದು. ಈ ಘಟಕಗಳಿಗೆ ತಗುಲುವ ತಲಾವೆಚ್ಚ ಅತ್ಯಲ್ಪ$. ಸಮುದಾಯ ಆಧಾರಿತ ಘಟಕ ಸ್ಥಾಪನೆಗೆ ತಗುಲಿದ ಒಟ್ಟು ಬಂಡವಾಳವನ್ನು ಕೇವಲ ಎರಡೇ ವರ್ಷದಲ್ಲಿ ಹಿಂಪಡೆಯಬಹುದು.

ವೈಯಕ್ತಿಕವಾಗಿ ಮತ್ತು ಸಮುದಾಯ ಆಧಾರಿತ ಘಟಕಗಳ ಸ್ಥಾಪನೆಗೆ ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದೆ. ಘಟಕಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯಧನ ದೊರೆಯುವುದರಿಂದ ರೈತರಿಗೆ ತಲೇ ನೋವಿಲ್ಲ. ಸಮುದಾಯ ಆಧಾರಿತವಾಗಿದ್ದರೆ ಘಟಕಗಳ ಸ್ಥಾಪನೆಗೆ ಅನುಕೂಲಕರ. ಜೊತೆಗೆ ಇಂಥ ಘಟಕಗಳ ನಿರ್ವಹಣೆ ಸುಲಭ. ಹೆಚ್ಚು ವೆಚ್ಚವಿಲ್ಲ ! ದೊಡ್ಡ ಪ್ರಮಾಣದಲ್ಲಿ ಸಮುದಾಯ ಆಧಾರಿತ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ವಿದ್ಯುತ್ ಪೂರೈಸಿ ಗ್ರಾಮೀಣ ಗ್ರಾಹಕರಿಂದ ಶುಲ್ಕ ಪಡೆಯಬಹುದು.
ಮುಖ್ಯವಾಗಿ ಇಂಥ ಘಟಕಗಳ ಸ್ಥಾಪನೆಯಿಂದ ಅಗಾಧ ಪ್ರಮಾಣದ ಡೀಸೆಲ್-ಪೆಟ್ರೋಲ್ ಉಳಿತಾಯವಾಗುತ್ತದೆ. ಈ ಘಟಕ ಹೊರದೂಡುವ ಹೊಗೆ ಪ್ರಮಾಣವೂ ಕಡಿಮೆ. ಘಟಕದ ನೆರವಿನಿಂದ ನೇರವಾಗಿ ನೀರೆತ್ತಬಹುದು. ಅಲ್ಲದೇ ಅಗತ್ಯವಿರುವ ಯಂತ್ರೋಪಕರಣ ಚಾಲನೆ ಮಾಡಬಹುದು. ಇವೆಲ್ಲದರ ಜೊತೆಗೆ ಇದು ಪರಿಸರಸ್ನೇಹಿ ತಂತ್ರಜ್ಞಾನವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ವಿ. ಕುಮಾರ ಗೌಡ, ಹಿರಿಯ ಸಂಶೋಧಕೃಷಿ ಇಂಜಿನಿಯರಿಂಗ್ ವಿಭಾಗ, ಜಿ.ಕೆ.ವಿ.ಕೆ. ಕೃಷಿ ವಿವಿ, ಬೆಂಗಳೂರು-ದೂ:99010 69131

3 comments:

 1. Anonymous10:49:00 AM

  thumbha usefull post thank u so much

  ReplyDelete
 2. Tumba chennagide....yella salakaranegala bele yestaagabhaudu ? idara maintaince hege ? idanna prayogikavaagi yelli noda bahudu ?

  idakke govt. ninda yenaadaru subsidy siguvude ?

  ReplyDelete
 3. ಡೀಸೆಲ್ ಇ೦ಜಿನ್ ನಲ್ಲಿ ಯಾವುದೇ ಮಾರ್ಪಾಡು ಮಾಡದೇ, ಏರ್ ಫಿಲ್ಟರ್ ನ ತಳಕ್ಕೆ ಗೋಬರ್ ಗ್ಯಾಸ್ ಊಡುವ೦ತೆ, ಟ್ಯಾಪ್ ಸಹಿತ ಸುಭದ್ರ ರಚನೆ ಅವಶ್ಯ. ಎ೦ಜಿನ್ ಆರ೦ಭ ಮಾಡುವಾಗ ಡೀಸೆಲ್ ನಿ೦ದಲೇ ಆರ೦ಭಿಸಬೇಕು, ಬಳಿಕ ಸುಮಾರು ೩೦-೪೦ ಸೆಕೆ೦ಡ ಅವಧಿಯಲ್ಲಿ ಗೋಬರ್ ಗ್ಯಾಸ್ ಪೂರೈಕೆ ಸ್ವಲ್ಪ ಸ್ವಲ್ಪವಾಗಿ ಹೆಚ್ಚಿಸುತ್ತ ಹೋದರೆ, ಎ೦ಜಿನ್ ಸಲೀಸಾಗಿ ನಡೆಯುತ್ತದೆ, ಲೋಡ್ ತೆಗೆದುಕೊಳ್ಳುವ ಸಾಮರ್ಥ್ಯ ಡೀಸೆಲ್ ಗಿ೦ತ ಸ್ವಲ್ಪ ಕಮ್ಮಿ. ಈ ರೀತಿ ಬಳಸಿದಾಗ, ಡೀಸೆಲ್ ಬಳಕೆಯಲ್ಲಿ ಸುಮಾರು ಶೇಕಡಾ ೭೦ ರಷ್ಟು ಉಳಿತಾಯವಾಗುತ್ತದೆ ಎನ್ನುತ್ತಾರೆ. ಎ೦ಜಿನ್ ನ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲವ೦ತೆ. ನಾನೂ ಈ ಮಾರ್ಪಾಡು, ಸುಮಾರು ರೂ ೨೦೦ ಖರ್ಚು ಮಾಡಿ ಮಾಡಿಕೊ೦ಡೆ, ಆದರೆ ಮನೆ ಬಳಕೆಗಾಗಿ ಉಳಿದ ಗ್ಯಾಸ್ ಮಾತ್ರ ನನಗೆ ಇದಕ್ಕೆ ಬಳಸಲು ಸಾಧ್ಯ, ಅಷ್ಟು ಗ್ಯಾಸ್ ನನ್ನಲ್ಲಿ ಲಭ್ಯವಿಲ್ಲ. ಬಹುತೇಕರಿಗೆ ಇದೇ ಸಮಸ್ಯೆ. ಗೋಬರ್ ಗ್ಯಾಸ್ ಉತ್ಪಾದನೆಯಾದ೦ತೆ ( ದಿನ ಲೆಕ್ಕದಲ್ಲಿ ಅಲ್ಲ, ಸಾಧಾರಣ ೩ -೪ ಗ೦ಟೆಗಳ ಅವಧಿಯಲ್ಲೇ ಹೆಚ್ಚಿನವರು ಬಳಸುತ್ತೇವೆ !) ಅದರ ಬಳಕೆ, ಮತ್ತು ಮಿಗತೆಯನ್ನು ಕೂಡಿಡುವುದು ಅಷ್ಟಾಗಿ ಪ್ರಾಯೋಗಿಕವಲ್ಲ, ವ್ಯಾವಹಾರಿಕವೂ ಅಲ್ಲ.

  ReplyDelete

ವಿಡಿಯೋ