ಅಣಬೆ ಕೃಷಿ


ಅಣಬೆ ಅತ್ಯುತ್ತಮ ಆಹಾರ. ಆದರೆ ಇದು ಇದುವರೆಗೂ ಜನಸಾಮಾನ್ಯರ ನಡುವೆ ಜನಪ್ರಿಯವಾಗದಿರುವುದೇ ಆಶ್ಚರ್ಯದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ ಇದು ಅಪಾಯಕಾರಿಯೂ ಆಗಬಹುದು. ಆಯ್ಕೆಮಾಡುವುದು ತಿಳಿಯದಿದ್ದಾಗ ವಿಷಕಾರಿ ಅಣಬೆ ತಿಂದು ತೀವ್ರ ತೊಂದರೆಗಳಿಗೆ ಸಿಲುಕಿದವರ ಉದಾಹರಣೆಗಳು ಅಪಾರ.
  
ನಗರಪ್ರದೇಶಗಳಲ್ಲಿ ಕೃತಕ ರೀತಿ ಅಣಬೆ ಕೃಷಿಯಿದೆ. ಇಂಥ ಕೃಷಿ ಹೆಚ್ಚಾಗಬೇಕಿತ್ತು. ಆದರೆ ಪ್ರಚಾರದ ಕೊರತೆ, ಜನಸಾಮಾನ್ಯರ ಒಲವು ಅತ್ತ ಬೆಳೆಯದ ಕಾರಣ ಅಣಬೆ ಕೃಷಿವೃತ್ತಿಯೂ ಜನಪ್ರಿಯವಾಗಿಲ್ಲ. ಹೆಚ್ಚಾಗಿಯೂ ಇಲ್ಲ. ಎಲ್ಲೋ ಅಲ್ಲೊಬರು ಇಲ್ಲೊಬ್ಬರು ಅಣಬೆ ಕೃಷಿಕರು ಕಾಣಸಿಗುತ್ತಾರೆ. ಸ್ವಾದಿಷ್ಟ ಅಣಬೆ ತಿನ್ನುವುದು ಇತ್ತೀಚಿನ ದಶಕಗಳಲ್ಲಿ ಬಂದ ರೂಢಿಯೆನ್ನಲ್ಲ. ಶತಶತಮಾನಗಳಿಂದಲೂ ಇದರ ಸೇವನೆಯಿದೆ. ವಿದೇಶಗಳಲ್ಲಿ ಸೈನಿಕರಿಗೆ ಇದನ್ನು ಪೌಷ್ಟಿಕ ಆಹಾರವಾಗಿ ನೀಡುತ್ತಿದ್ದ ಉಲ್ಲೇಖಗಳಿವೆ.
  
ಮಿಲ್ಕಿ ಅಣಬೆ ( ಹಾಲಣಬೆ), ಬಟನ್ ಅಣಬೆ, ಚಿಪ್ಪು ಅಣಬೆ ಕೃಷಿ ಮಾಡಲಾಗುತ್ತದೆ. ಭಾರತದಲ್ಲಿ ಹಾಲಣಬೆ ಕೃಷಿಯೇ ಹೆಚ್ಚು. ಆದರೆ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಣಬೆ ಕೃಷಿ ಪ್ರಮಾಣ ತೀರಾ ಕಡಿಮೆ. ವಾಣಿಜ್ಯ ಬೆಳೆಯಾಗುವ ಎಲ್ಲ ಅವಕಾಶಗಳೂ ಇದ್ದರೂ ಇದರ ಕೃಷಿ ಹೆಚ್ಚುತ್ತಿಲ್ಲ. ಭಾರತಕ್ಕೆ ಹೋಲಿಸಿದರೆ ತೈವಾನ್ ಪುಟ್ಟರಾಷ್ಟ್ರ. ಇಲ್ಲಿ ಅಣಬೆ ಕೃಷಿ ಭಾರಿ ಜನಪ್ರಿಯ. ನೆದರ್ ಲ್ಯಾಂಡ್, ಅಮೆರಿಕಾ ಮತ್ತು ಚೀನಾಗಳಲ್ಲಿಯೂ ಭಾರಿ ಪ್ರಮಾಣದ ಕೃಷಿ ನಡೆಯುತ್ತಿದೆ. ಚೀನಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಣಬೆ ಕೃಷಿ ಇದೆ.

ಕರ್ನಾಟಕವೂ ಸೇರಿದಂತೆ ದೇಶದ ಇತರ ಹಲವು ರಾಜ್ಯಗಳ ಹವಾಮಾನ ಅಣಬೆ ಕೃಷಿಗೆ ಅನುಕೂಲಕರ. ಆದರೂ ಇಲ್ಲಿ ಇದರ ಕೃಷಿ ಕಡಿಮೆಯಾಗಿರುವುದಕ್ಕೆ ಕೆಲವು ಕಾರಣಗಳಿವೆ. ಅಣಬೆ ಕೃಷಿ ಬಗ್ಗೆ ದೊರೆಯುತ್ತಿರುವ ಮಾಹಿತಿ ಕಡಿಮೆ. ಇತರ ಬಿತ್ತನೆ ಬೀಜಗಳ ರೀತಿ ಎಲ್ಲೆಡೆ ಅಣಬೆ ಬಿತ್ತನೆ ಬೀಜಗಳು ದೊರೆಯದಿರುವುದು. ಮಾರುಕಟ್ಟೆ ಆತಂಕ. ಇತ್ತೀಚಿನ ವರ್ಷಗಳಲ್ಲಿ ಹೋಟೆಲುಗಳಲ್ಲಿ ಅಣಬೆಯಿಂದ ಮಾಡಿದ ತಿನಿಸುಗಳು ದೊರೆಯುತ್ತಿವೆ. ಆದ್ದರಿಂದ ಹೋಟೆಲುಗಳ ಮಾರುಕಟ್ಟೆ ಲಭ್ಯವಿದೆ. ಸೂಕ್ತ ಪ್ರಚಾರ ಮಾಡಿದರೆ ಜನಸಾಮಾನ್ಯರ ನಡುವೆಯೂ ಅಣಬೆ ತಿನಿಸುಗಳು ಜನಪ್ರಿಯವಾಗುತ್ತವೆ.

ಅಣಬೆಯಲ್ಲಿ ಕೆಲವು ವಿಶೇಷ ಅಂಶಗಳಿವೆ. ಮೊದಲೇ ಹೇಳಿದ ಹಾಗೆ ಇದು ಪೌಷ್ಟಿಕಾಂಶಗಳ ಅಗರ. ಸಕ್ಕರೆ, ಕೊಬ್ಬಿನ ಅಂಶ ಕಡಿಮೆ. ಇದರಿಂದ ಮಧುಮೇಹಿಗಳು-ಹೃದ್ರೋಗದ ಸಮಸ್ಯೆಗಳಿಂದ ಬಳಲುತ್ತಿರುವವರೂ  ಸೇವಿಸಬಹುದು. ಮಕ್ಕಳಿಗೆ ಇದು ಅತ್ಯುತ್ತಮ ಪೋಷಕಾಂಶ ನೀಡುವ ಆಹಾರ. ತಿನ್ನಲು ಅರ್ಹವಾದ ಅಣಬೆ ಸೇವನೆಯಿಂದ ಮಕ್ಕಳ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಮುಖ್ಯವಾಗಿ ಇವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ

ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆಯವರು ಇದರ ಕೃಷಿ ಬಗ್ಗೆ ಅಗತ್ಯ ಮಾಹಿತಿ ನೀಡುತ್ತಾರೆ. ಜೊತೆಗೆ ಆಗಾಗ ಅಣಬೆ ಕೃಷಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಹೆಚ್ಚಿನ ವಿವರಗಳಿಗೆ ಸಮೀಪದ ತೋಟಗಾರಿಕಾ ಇಲಾಖೆ ಕಛೇರಿ ಸಂಪರ್ಕಿಸಿ.

3 comments:

  1. i want grow milky mushroom.i want to know the temperature details and the theatricality what the need of envelopment to grow.and details of its marketing agencies.

    ReplyDelete
  2. ಹಣಬೆ ಬೆಳೆಯುವ ಬಗೆ ಹೇಗೆ

    ReplyDelete
  3. ಹಣಬೆ ಬೆಳೆಯುವ ಬಗೆ ತಿಳಿಸಿ

    ReplyDelete

ವಿಡಿಯೋ